My world

"Life" of mine is filled with shine of many beauties and sparkles of many lives.
ನೋವಲ್ಲಿ ನಲಿವಲ್ಲಿ ನನ್ನಾಸರೆಯೆ ಸಂಗೀತ
ಮನಸ್ಸೂರಿನ ಹಾದಿಯಲ್ಲಿ ಮನಸ್ಥಾಪಗಳ ನಡುವಲ್ಲಿ ಮನಸೂರೆಗೊಳಿಸುವುದೆ ಸಂಗೀತ
ಹೃದಯಾಂತರಾಳಾದಲ್ಲಿ ಹೃದಯಗೀತೆಯಾಗಿ ಹೊರಹೊಮ್ಮುವುದೆ ಸಂಗೀತ
ಸಂಗೀತ ಸುಧೆಯ ಸವಿಯನ್ನು ಸವಿಯೋಣ ಬಾ

ನನ್ನ ಮನ ಮುಟ್ಟಿದ ಹಾಡು

ಚಿತ್ರ : ಮುಂಗಾರು ಮಳೆ ,ಸಾಹಿತ್ಯ : ಜಯಂತ್ ಕಾಯ್ಕಿಣಿ, ಗಾಯಕಿ : ಶ್ರೇಯ ಘೋಶಲ್

ಅರಳುತಿರೊ ಜೀವದ ಗೆಳಯ, ಸ್ನೇಹದ ಸಿಂಚನದಲ್ಲಿ
ಬಾಡದಿರು ಸ್ನೇಹದ ಹೂವೇ ,ಪ್ರೇಮದ ಬಂಧನದಲ್ಲಿ
ಮನಸಲ್ಲೆ ಇರಲಿ ಭಾವನೆ,ಮಿಡಿಯುತಿರಲಿ ಮೌನ ವೀಣೆ ಹೀಗೇ ಸುಮ್ಮನೆ
ಅರಳುತಿರೊ ಜೀವದ ಗೆಳಯ...........

ಹಕ್ಕಿಯು ಹಾಡಿದೆ,ತನ್ನ ಹೆಸರನು ಹೇಳದೆ
ಸಂಪಿಗೆ ಬೀರಿದೆ ,ಕಂಪನು ಯಾರಿಗು ಕೇಳದೆ
ಬೀಸುವ ಗಾಳಿಯ ಹಕ್ಕಿಯ ಹಾಡಿನ ನಂಟಿಗೆ ಹೆಸರಿನ ಹಂಗಿಲ್ಲ ,ನಮಗೇಕೆ ಅದರ ಯೋಚನೆ
ಬೇಡ ಗೆಳಯ ನಂಟಿಗೆ ಹೆಸರು,ಯಾಕೆ ಸುಮ್ಮನೆ
ಅರಳುತಿರೊ ಜೀವದ ಗೆಳಯ...........

ಮಾತಿಗೆ ಮೀರಿದ, ಭಾವದ ಸೆಳೆತವೇ ಸುಂದರ
ನಲುಮೆಯು ತುಂಬಿದ ,ಮನಸ್ಸಿಗೆ ಬಾರದು ಬೇಸರ
ಬಾಳ ದಾರಿಯಲ್ಲಿ ಬೇರೆಯಾದರು ಚಂದಿರ ಬರುವನು ನಮ್ಮ ಜೊತೆ
ಕಾಣುವೆನು ಅವನಲಿ ನಿನ್ನನೆ
ಇರಲಿ ಗೆಳೆಯ ಈ ಅನುಬಂಧ ಹೀಗೇ ಸುಮ್ಮನೆ

ಅರಳುತಿರೊ ಜೀವದ ಗೆಳಯ,ಸ್ನೇಹದ ಸಿಂಚನದಲ್ಲಿ
ಬಾಡದಿರು ಸ್ನೇಹದ ಹೂವೇ ,ಪ್ರೇಮದ ಬಂಧನದಲ್ಲಿ
ಮನಸ್ಸಲ್ಲೆ ಇರಲಿ ಭಾವನೆ,ಮಿಡಿಯುತಿರಲಿ ಮೌನ ವೀಣೆ ಹೀಗೇ ಸುಮ್ಮನೆ
ಅರಳುತಿರೊ ಜೀವದ ಗೆಳಯ...........


ಈ ಗೀತೆ ಎಷ್ಟೊ ಜನರ ಮನದಾಳದ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಅನೋದು ನನ್ನ ಭಾವನೆ,ಯಾಕೆಂದರೆ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಾದ ಪ್ರೇಮಕಥೆಯಲ್ಲಿ ಪಾತ್ರಧಾರಿಗಳೆ,ಕೆಲವರು ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸಿ ವಾಸ್ತವದಲ್ಲಿ ಪಾತ್ರಧಾರಿಗಳಾಗಿದ್ದರೆ, ಇನ್ನು ಕೆಲವರು ಮನಸ್ಸಿನ ಭಾವನೆಗಳನ್ನು ಎದೆಯಾಳದಲ್ಲಿ ಹಿಡಿದಿಟ್ಟುಕೊಂಡು ತಮ್ಮದೆ ಆದ ಕಲ್ಪನಾಲೋಕದ ಪ್ರೇಮಕಥೆಯಲ್ಲಿ ಪಾತ್ರಧಾರಿಗಳಾಗಿರುತ್ತಾರೆ.ಇಲ್ಲಿ ಪ್ರೇಯಸಿಯೊಬ್ಬಳು ತಾತ್ವಿಕ ಪ್ರೀತಿಯಿಂದ ನೈಜ ಪ್ರೀತಿಗೆ ಪಯಣ ಅಗತ್ಯವಿಲ್ಲ ಎಂಬುವುದನ್ನು ಉದಾಹರಣೆಯ ಮುಖಾಂತರ ವ್ಯಕ್ತಪಡಿಸಿದ್ದಾಳೆ.ಈ ಪಯಣ ಹಲವಾರು ಮನಸ್ಸುಗಳನ್ನು ದಾಟಿ ಬರಬೇಕಾಗಿರುವುದರಿಂದ ಪ್ರೀತಿಯಾದ ಮೇಲೆ ಮದುವೆಯೆ ಅಥವಾ ಮದುವೆಯೆ ನಂತರ ಪ್ರೀತಿಯೆ ಎನ್ನುವ ವಿಚಾರ ಇನ್ನೂ ವಾಗ್ವಾದಕೆ ಗುರಿಯಾಗಿರುವುದು.ಬೀಸುವ ಗಾಳಿಗೂ ಹಕ್ಕಿಯ ಹಾಡಿಗೂ ಇರುವಂತಹ ನಂಟಿಗೆ ಏನೂ ಹೆಸರಿಲ್ಲ ,ಹೀಗಿರಬೇಕಾದರೆ ನಮ್ಮ ನಂಟಿಗೆ ಸ್ನೇಹ ಅಥವಾ ಪ್ರೀತಿ ಎಂದು ಹೆಸರು ಯಾಕೇ ಬೇಕು ಎನ್ನುವುದು ಅವಳ ಭಾವನೆ. ಇದರ ಬಗ್ಗೆ ನಮ್ಮ ತರ್ಕ ಬೇಡ,ಇದು ಅಸಾಧ್ಯವೆನ್ನಿಸಿದರು ಹಲವಾರು ಹೃದಯಗಳ ಮಿಡಿತ.

2 comments:

ಸೂರ್ಯಕಿರಣ್ ಜೋಯಿಸ್ said...

ರಮ್ಯ, ನಿನ್ನ ಅಭಿಪ್ರಾಯ ನಿಜ. ಬದುಕಿನಲ್ಲಿ ಕೆಲವು ವಿಷಯಗಳು ತರ್ಕಕ್ಕೆ ನಿಲುಕುವಂತಹವಲ್ಲ. ಹಾಡಿನಲ್ಲಿ ಹೇಳಿರುವಂತೆ ಅವು ಮೌನ ವೀಣೆಯಂತಿದ್ದರೇ ಸರಿ. ಇಂತಹ ಸೂಕ್ಷ್ಮ ವಿಷಯವನ್ನು ಈ ಗೀತೆಯಲ್ಲಿ ಭಾವಪೂರ್ಣವಾಗಿ ಅನಾವರಣಗೊಳಿಸಲಾಗಿದೆ. ಇದನ್ನು ಅರ್ಥಪೂರ್ಣವಾಗಿ ವಿಮರ್ಶಿಸಿದ್ದಕ್ಕೆ ಧನ್ಯವಾದಗಳು.

ಸುಧೇಶ್ ಶೆಟ್ಟಿ said...

jayanth kaaykiniyavaru eshtu chennaagi saahithya bareyuththaare...
"Beda geleya nantige hesaru..." eshtu sundara saalugalu.