My world

"Life" of mine is filled with shine of many beauties and sparkles of many lives.
ನೋವಲ್ಲಿ ನಲಿವಲ್ಲಿ ನನ್ನಾಸರೆಯೆ ಸಂಗೀತ
ಮನಸ್ಸೂರಿನ ಹಾದಿಯಲ್ಲಿ ಮನಸ್ಥಾಪಗಳ ನಡುವಲ್ಲಿ ಮನಸೂರೆಗೊಳಿಸುವುದೆ ಸಂಗೀತ
ಹೃದಯಾಂತರಾಳಾದಲ್ಲಿ ಹೃದಯಗೀತೆಯಾಗಿ ಹೊರಹೊಮ್ಮುವುದೆ ಸಂಗೀತ
ಸಂಗೀತ ಸುಧೆಯ ಸವಿಯನ್ನು ಸವಿಯೋಣ ಬಾ

Enya - Only time

Who can say
Where the road goes
Where the day flows
- Only time

Who can say why your heart sighs
as your love flies
-Only time

And who can say why your heart cries
when your love lies
-Only time

Who can say when the roads meet
that love might be
in your heart

And who can say
when the day sleeps
if the night keeps
all your heart

Night keeps all your heart

Who can say if your love grows
as your heart shows
-Only time

And who can say
Where the road goes
Where the day flows,
-Only time

Who knows-only time
Who knows-only time.....

ಜೀವನ

ಭಾವನೆಗಳನ್ನು ಬೆಸೆದು ಸಂಭದಗಳ ಚಕ್ರವ್ಯೂವದಲ್ಲಿ ಸಿಕ್ಕಿಸಿ,

ತಮಾಷೆಯನ್ನು ನೋಡುವ ಓ ಜೀವವಿಲ್ಲದ ಜೀವವೆ,

ನನಗೊಂದು ತಿಳಿಸು,ಯಾತಕಿ ಈ ನಮ್ಮ ಪಯಣ

ಯಾರನ್ನು ಓಲೈಸಲು,ಯಾರನ್ನು ಸಂತೈಸಲು

ನೋವೆಲ್ಲ ನನಗಿರಲ್ಲಿ , ಎನ್ನುವುದು ತ್ಯಾಗವೆ, ಅದು ಸಾಧ್ಯವೆ,

ಈ ನಶ್ವರ ಜೀವನದಲ್ಲಿ,ನಮ್ಮ ಪಯಣ ಶರ ವೇಗದಲ್ಲಿ ಓಡುತಿದೆ,

ವಾಸ್ತವ್ವವೆಂಬುವುದ ವಾಸ್ತವವಲ್ಲ ,ಎಂದು ತಿಳಿ ಹೇಳುವವರ್ಯಾರು.

Very true...............

ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ
ಮೋಡ ಕಟ್ಟೀತು ಹೇಗೆ
ಹನಿ ವಡೆದು ಕೆಳಗಿಳಿದು , ಹಸಿರು ಮೂಡೀತು ಹೇಗೆ
ಮಾತಿಗೆ ಮಾತು ಕೂಡೀತು ಹೇಗೆ
ಅರ್ಥ ಹುಟ್ಟೀತು ಹೇಗೆ
ಬರಿ ಪದಕ್ಕೆ ಪದ ಜೊತೆಗಿದ್ದ ಮಾತ್ರಕ್ಕೆ ಪತ್ರವಾದೀತು ಹೇಗೆ
ಪ್ರೀತಿ ಇಲ್ಲದ ಮೇಲೆ

ಮಿಲನ ಚಿತ್ರದ ಗೀತೆಗಳ ಸಾಹಿತ್ಯ

ನಿನ್ನಿಂದಲೆ

ಹೆ ಹೆ ಆ ಆ , ತನನಾನ ನನನಾನ ನನನಾನ

ನಿನ್ನಿಂದಲೆ ನಿನ್ನಿಂದಲೆ ಕನಸೊಂದು ಶುರುವಾಗಿದೆ
ನಿನ್ನಿಂದಲೆ ನಿನ್ನಿಂದಲೆ ಮನಸ್ಸಿಂದು ಕುಣಿದಾಡಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಹಲ,ನನ್ನೆದುರಲ್ಲೆ ನೀ ಹೀಗೆ ಬಂದಾಗಲೆ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ,ನಾ ನಿಂತಲ್ಲೆ ಹಾಡಾದೆ ನಿನ್ನಿಂದಲೆ

ನಿನ್ನಿಂದಲೆ ನಿನ್ನಿಂದಲೆ ಕನಸೊಂದು ಶುರುವಾಗಿದೆ
ನಿನ್ನಿಂದಲೆ ನಿನ್ನಿಂದಲೆ ಮನಸ್ಸಿಂದು ಕುಣಿದಾಡಿದೆ

ಇರುಳಲ್ಲಿ ಜ್ವರದಂತೆ ಕಾಡಿ ಈಗ, ಹಾಯಾಗ ನಿಂತಿರುವೆ ಸರಿಯೇನು
ಬೇಕಂತಲೆ ಮಾಡಿ ಏನೋ ಮೋಡಿ, ಇನ್ನೆಲ್ಲೋ ನೋಡುವ ಪರಿಯೇನು.
ಈ ಮಾಯೆಗೆ , ಮರುಳಿಗೆ , ನಿನ್ನಿಂದ ಕಳೆ ಬಂದಿದೆ.

ನಿನ್ನಿಂದಲೆ ನಿನ್ನಿಂದಲೆ ಕನಸೊಂದು ಶುರುವಾಗಿದೆ

ಹೆ ಹೆ ಆ ಆ , ತನನಾನ ನನನಾನ ನನನಾನ

ಹೋದಲ್ಲಿ ಬಂದಲ್ಲಿ ಎಲ್ಲಾ ನಿನ್ನ ಸೊಂಪಾದ ಚೆಲುವಿನ ಗುಣಗಾನ
ಕೇದಿಗೆ ಗರಿಯಂಥ ನಿನ್ನ ನೋಟ ,ನನಗೇನೊ ಅಂದಂತೆ ಅನುಮಾನ
ಕಣ್ಣಿಂದಲೆ ಸದ್ದಿಲ್ಲದೆ ಮುದ್ದಾದ ಕರೆ ಬಂದಿದೆ

ನಿನ್ನಿಂದಲೆ ನಿನ್ನಿಂದಲೆ ಕನಸೊಂದು ಶುರುವಾಗಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಹಲ,ನನ್ನೆದುರಲ್ಲೆ ನೀ ಹೀಗ ಬಂದಾಗಲೆ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ,ನಾ ನಿಂತಲ್ಲೆ ಹಾಡಾದೆ ನಿನ್ನಿಂದಲೆ

ನಿನ್ನಿಂದಲೆ ನಿನ್ನಿಂದಲೆ ಕನಸೊಂದು ಶುರುವಾಗಿದೆ
ನಿನ್ನಿಂದಲೆ ನಿನ್ನಿಂದಲೆ ಮನಸ್ಸಿಂದು ಕುಣಿದಾಡಿದೆ



ಮಳೆ ನಿಂತು ಹೋದ ಮೇಲೆ

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ,
ಮಾತೆಲ್ಲ ಮುಗಿದ ಮೇಲೆ, ದನಿಯೊಂದು ಕಾಡಿದೆ,
ಹೇಳುವುದು ಏನು ಉಳಿದು ಹೋಗಿದೆ,
ಹೇಳಲಿ ಹೇಗೆ ತಿಳಿಯದಾಗಿದೆ

ನೋವಿನಲ್ಲಿ ಜೀವ ಜೀವ ಅರಿತ ನಂತರ
ನಲಿವು ಬೇರೆ ಏನಿದೆ,ಏಕೆ ಅಂತರ
ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ
ಒಂದೆ ಸಾರಿ ನೀ ಕೇಳೆಯಾ ಈ ಸ್ವರ
ಮನಸ್ಸಲ್ಲಿ ಚೂರು ಜಾಗ ಬೇಕಿದೆ,ಕೇಳಲಿ ಹೇಗೆ ತಿಳಿಯದಾಗಿದೆ.

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ,
ಮಾತೆಲ್ಲ ಮುಗಿದ ಮೇಲೆ, ದನಿಯೊಂದು ಕಾಡಿದೆ.

ಕಣ್ಣು ತೆರೆದು ಕಾಣುವ ಕನಸೆ ಜೀವನ
ಸಣ್ಣ ಹಟವ ಮಾಡಿದೆ, ಹೃದಯ ಈ ದಿನ
ಎದೆಯ ದೂರವಾಣಿಯ ಕರೆಯ ರಿಂಗನ,
ಕೇಳು ಜೀವವೆ, ಏತಕೀ ಕಂಪನ
ಹೃದಯವು ಇಲ್ಲೆ ಕಳೆದು ಹೋಗಿದೆ,
ಹುಡುಕಲೆ, ಹೇಗೆ ತಿಳಿಯದಾಗಿದೆ


ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ,
ಮಾತೆಲ್ಲ ಮುಗಿದ ಮೇಲೆ, ದನಿಯೊಂದು ಕಾಡಿದೆ.
ಹೇಳುವುದು ಏನು ಉಳಿದು ಹೋಗಿದೆ,
ಹೇಳಲಿ ಹೇಗೆ ತಿಳಿಯದಾಗಿದೆ

ಐಟಿ ಬದುಕು

ಐಟಿ ಬದುಕು
"ದೂರದ ಬೆಟ್ಟ ನುಣ್ಣಗೆ" ಅನ್ನುವ ನಾಣ್ನುಡಿಯನ್ನು ನೀವೆಲ್ಲರು ಕೇಳೆ ಇರ್ತಿರಿ.ಎನೇ ಹೇಳಿ, ಈ ಗಾದೆಗಳು ತುಂಬಾ Great,ಎಷ್ಟು ಸತ್ಯ ತುಂಬಿರುತ್ತೆ ಇವಗಳಲಿ ಅಲ್ಲವೆ.ಐಟಿ ಜೀವನವು ಅಷ್ಟೆ ,ಈ ಗಾದೆಯ ತಾತ್ಪರ್ಯಕ್ಕೆ ಒಂದು ಉದಾಹರಣೆ. ನಾನು ಕೂಡ ಈ ಐಟಿ ಜೀವನದ ಒಂದು ಭಾಗವೆ.ಇಲ್ಲಿ ನನ್ನ ಕೆಲವು ಅಭಿಪ್ರಾಯಗಳನ್ನು ಮಂಡಿಸುವ ಪ್ರಯತ್ನವನ್ನ ಮಾಡಿದ್ದೀನಿ.ಓದುತ್ತ ಓದತ್ತ ನಿಮಗೆ ಕೆಲವು ಸರಿ ಅನಿಸಿದ್ದರೆ ,ಇನ್ನ ಕೆಲವು ತಪ್ಪು ಅನಿಸ ಬಹುದು.ತಪ್ಪಿದಲ್ಲಿ ದಯಮಾಡಿ ನನ್ನನು ಕ್ಷಮಿಸಿ,ಏಕೆಂದರೆ ಇಲ್ಲಿರುವುದು ನನ್ನ ವಯಕ್ತಿಕ ಅಭಿಪ್ರಾಯ ಅಷ್ತೆ.ಸತ್ಯ ಹೇಳಬೇಕೆಂದರೆ ನಾವುಗಳು ತುಂಬಾ ಪುಣ್ಯವಂತರು , ಯಾಕೆ ಗೊತ್ತ , ನಮಗೆ ಕೈ ತುಂಬ ಸಂಬಳ ಬರುತ್ತೆ.Confuse ಹಾಗಬೇಡಿ, ಕೈ ತುಂಬ ಅಂದರೆ ಊಟ ತಿಂಡಿ ನಿದ್ದ್ರೆಗೆ ತೊಂದರೆ ಇರೊಲ್ಲ ಹಾಗು ಪ್ರಯತ್ನ ಮಾಡಿದರೆ ಉಳಿತಾಯ ಕೂಡ ಮಾಡಹುದು ಅಂತ ಅಷ್ಟೆ.ಮನುಷ್ಯರಲ್ಲಿ ಈ ಸಾಮಾನ್ಯವಾಗಿ ಕೆಲವು ಗುಣಗಳನ್ನು ತುಂಬಾ ಅಡಿಗಡಿಗೆ ಕಾಣ್ತೀರಿ,ಎಷ್ಟೆ ಇದ್ದರೂ ,ನಮ್ಮ ಹತ್ತಿರ ಎನೂ ಇಲ್ಲ ಅನ್ನವ ಭಾವನೆ ಕೆಲುವರದು ಹಾಗಿದ್ದರೆ,ಎನೂ ಇಲ್ಲದೆ ಇದ್ದರೆ,ನಾನೆ ಮಹಾನ ಅನ್ನ್ವವ ಭಾವನೆ ಇನ್ನು ಕೆಲವರದು.ಇಲ್ಲಿ ನಾನು ಹಣ ಹಾಗು ಜ್ಙನದ ಬಗ್ಗೆ ಮಾತನ್ನಾಡಿತಿದ್ದೀನಿ.ಇದ್ದರಲ್ಲಿ ಯಾವುದು ಸರಿ,ಯಾವುದು ತಪ್ಪು ಅನ್ನುವ ಬಗ್ಗೆ ನನ್ನ ವಾದ ಬೇಡ.ಮದೊಲನೆಯವರು ನಿರಾಶವಾದಿಗಳೊ ಅಥಾವ ಎರಡನೆಯವರು ಅಶಾವಾದಿಗಳೊ ನನ್ನಗೆ ತಿಳಿಯದು.ಆದರೆ ನನ್ನ ಅನುಭವದ ಪ್ರಕಾರ,ಎರಡನೆ ಗುಂಪಿಗೆ ಸೇರಿದಂತಹವರು ಅಧಿಕ್ರುತವಾಗಿ ಐಟಿ ಗಡಿಗೆ ಸೀಮಿತರಾಗಿದ್ದಾರ.
yet to be continued.........

ಐಟಿ ಜೀವಗಳು

ಅದೋ ನೋಡು ಐಟಿ ಜೀವಗಳು ಎಷ್ಟು ಸುಂದರ
ಎಲ್ಲೆ ಹೋಗಲಿ ಇವರಿಗೆ ಎಲ್ಲಿಲದ ಆದರ
ಶನಿ,ರವಿ ಹತ್ತಿರವಾದಂತೆ ಎನೊ ಸಾಧಿಸಿದ ಸಂಭ್ರಮದ ಸಡಗರ
ಮರಣರೇಖೆ ಬಂದರಂತೂ ಸಡಗರವೆಲ್ಲವು ಗಾಳಿ ಗೋಪುರ

ನನ್ನ ಮನ ಮುಟ್ಟಿದ ಹಾಡು

ಚಿತ್ರ : ಮುಂಗಾರು ಮಳೆ ,ಸಾಹಿತ್ಯ : ಜಯಂತ್ ಕಾಯ್ಕಿಣಿ, ಗಾಯಕಿ : ಶ್ರೇಯ ಘೋಶಲ್

ಅರಳುತಿರೊ ಜೀವದ ಗೆಳಯ, ಸ್ನೇಹದ ಸಿಂಚನದಲ್ಲಿ
ಬಾಡದಿರು ಸ್ನೇಹದ ಹೂವೇ ,ಪ್ರೇಮದ ಬಂಧನದಲ್ಲಿ
ಮನಸಲ್ಲೆ ಇರಲಿ ಭಾವನೆ,ಮಿಡಿಯುತಿರಲಿ ಮೌನ ವೀಣೆ ಹೀಗೇ ಸುಮ್ಮನೆ
ಅರಳುತಿರೊ ಜೀವದ ಗೆಳಯ...........

ಹಕ್ಕಿಯು ಹಾಡಿದೆ,ತನ್ನ ಹೆಸರನು ಹೇಳದೆ
ಸಂಪಿಗೆ ಬೀರಿದೆ ,ಕಂಪನು ಯಾರಿಗು ಕೇಳದೆ
ಬೀಸುವ ಗಾಳಿಯ ಹಕ್ಕಿಯ ಹಾಡಿನ ನಂಟಿಗೆ ಹೆಸರಿನ ಹಂಗಿಲ್ಲ ,ನಮಗೇಕೆ ಅದರ ಯೋಚನೆ
ಬೇಡ ಗೆಳಯ ನಂಟಿಗೆ ಹೆಸರು,ಯಾಕೆ ಸುಮ್ಮನೆ
ಅರಳುತಿರೊ ಜೀವದ ಗೆಳಯ...........

ಮಾತಿಗೆ ಮೀರಿದ, ಭಾವದ ಸೆಳೆತವೇ ಸುಂದರ
ನಲುಮೆಯು ತುಂಬಿದ ,ಮನಸ್ಸಿಗೆ ಬಾರದು ಬೇಸರ
ಬಾಳ ದಾರಿಯಲ್ಲಿ ಬೇರೆಯಾದರು ಚಂದಿರ ಬರುವನು ನಮ್ಮ ಜೊತೆ
ಕಾಣುವೆನು ಅವನಲಿ ನಿನ್ನನೆ
ಇರಲಿ ಗೆಳೆಯ ಈ ಅನುಬಂಧ ಹೀಗೇ ಸುಮ್ಮನೆ

ಅರಳುತಿರೊ ಜೀವದ ಗೆಳಯ,ಸ್ನೇಹದ ಸಿಂಚನದಲ್ಲಿ
ಬಾಡದಿರು ಸ್ನೇಹದ ಹೂವೇ ,ಪ್ರೇಮದ ಬಂಧನದಲ್ಲಿ
ಮನಸ್ಸಲ್ಲೆ ಇರಲಿ ಭಾವನೆ,ಮಿಡಿಯುತಿರಲಿ ಮೌನ ವೀಣೆ ಹೀಗೇ ಸುಮ್ಮನೆ
ಅರಳುತಿರೊ ಜೀವದ ಗೆಳಯ...........


ಈ ಗೀತೆ ಎಷ್ಟೊ ಜನರ ಮನದಾಳದ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಅನೋದು ನನ್ನ ಭಾವನೆ,ಯಾಕೆಂದರೆ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಾದ ಪ್ರೇಮಕಥೆಯಲ್ಲಿ ಪಾತ್ರಧಾರಿಗಳೆ,ಕೆಲವರು ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸಿ ವಾಸ್ತವದಲ್ಲಿ ಪಾತ್ರಧಾರಿಗಳಾಗಿದ್ದರೆ, ಇನ್ನು ಕೆಲವರು ಮನಸ್ಸಿನ ಭಾವನೆಗಳನ್ನು ಎದೆಯಾಳದಲ್ಲಿ ಹಿಡಿದಿಟ್ಟುಕೊಂಡು ತಮ್ಮದೆ ಆದ ಕಲ್ಪನಾಲೋಕದ ಪ್ರೇಮಕಥೆಯಲ್ಲಿ ಪಾತ್ರಧಾರಿಗಳಾಗಿರುತ್ತಾರೆ.ಇಲ್ಲಿ ಪ್ರೇಯಸಿಯೊಬ್ಬಳು ತಾತ್ವಿಕ ಪ್ರೀತಿಯಿಂದ ನೈಜ ಪ್ರೀತಿಗೆ ಪಯಣ ಅಗತ್ಯವಿಲ್ಲ ಎಂಬುವುದನ್ನು ಉದಾಹರಣೆಯ ಮುಖಾಂತರ ವ್ಯಕ್ತಪಡಿಸಿದ್ದಾಳೆ.ಈ ಪಯಣ ಹಲವಾರು ಮನಸ್ಸುಗಳನ್ನು ದಾಟಿ ಬರಬೇಕಾಗಿರುವುದರಿಂದ ಪ್ರೀತಿಯಾದ ಮೇಲೆ ಮದುವೆಯೆ ಅಥವಾ ಮದುವೆಯೆ ನಂತರ ಪ್ರೀತಿಯೆ ಎನ್ನುವ ವಿಚಾರ ಇನ್ನೂ ವಾಗ್ವಾದಕೆ ಗುರಿಯಾಗಿರುವುದು.ಬೀಸುವ ಗಾಳಿಗೂ ಹಕ್ಕಿಯ ಹಾಡಿಗೂ ಇರುವಂತಹ ನಂಟಿಗೆ ಏನೂ ಹೆಸರಿಲ್ಲ ,ಹೀಗಿರಬೇಕಾದರೆ ನಮ್ಮ ನಂಟಿಗೆ ಸ್ನೇಹ ಅಥವಾ ಪ್ರೀತಿ ಎಂದು ಹೆಸರು ಯಾಕೇ ಬೇಕು ಎನ್ನುವುದು ಅವಳ ಭಾವನೆ. ಇದರ ಬಗ್ಗೆ ನಮ್ಮ ತರ್ಕ ಬೇಡ,ಇದು ಅಸಾಧ್ಯವೆನ್ನಿಸಿದರು ಹಲವಾರು ಹೃದಯಗಳ ಮಿಡಿತ.