ಮಿಲನ ಚಿತ್ರದ ಗೀತೆಗಳ ಸಾಹಿತ್ಯ
ನಿನ್ನಿಂದಲೆ
ಹೆ ಹೆ ಆ ಆ , ತನನಾನ ನನನಾನ ನನನಾನ
ನಿನ್ನಿಂದಲೆ ನಿನ್ನಿಂದಲೆ ಕನಸೊಂದು ಶುರುವಾಗಿದೆ
ನಿನ್ನಿಂದಲೆ ನಿನ್ನಿಂದಲೆ ಮನಸ್ಸಿಂದು ಕುಣಿದಾಡಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಹಲ,ನನ್ನೆದುರಲ್ಲೆ ನೀ ಹೀಗೆ ಬಂದಾಗಲೆ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ,ನಾ ನಿಂತಲ್ಲೆ ಹಾಡಾದೆ ನಿನ್ನಿಂದಲೆ
ನಿನ್ನಿಂದಲೆ ನಿನ್ನಿಂದಲೆ ಕನಸೊಂದು ಶುರುವಾಗಿದೆ
ನಿನ್ನಿಂದಲೆ ನಿನ್ನಿಂದಲೆ ಮನಸ್ಸಿಂದು ಕುಣಿದಾಡಿದೆ
ಇರುಳಲ್ಲಿ ಜ್ವರದಂತೆ ಕಾಡಿ ಈಗ, ಹಾಯಾಗ ನಿಂತಿರುವೆ ಸರಿಯೇನು
ಬೇಕಂತಲೆ ಮಾಡಿ ಏನೋ ಮೋಡಿ, ಇನ್ನೆಲ್ಲೋ ನೋಡುವ ಪರಿಯೇನು.
ಈ ಮಾಯೆಗೆ , ಮರುಳಿಗೆ , ನಿನ್ನಿಂದ ಕಳೆ ಬಂದಿದೆ.
ನಿನ್ನಿಂದಲೆ ನಿನ್ನಿಂದಲೆ ಕನಸೊಂದು ಶುರುವಾಗಿದೆ
ಹೆ ಹೆ ಆ ಆ , ತನನಾನ ನನನಾನ ನನನಾನ
ಹೋದಲ್ಲಿ ಬಂದಲ್ಲಿ ಎಲ್ಲಾ ನಿನ್ನ ಸೊಂಪಾದ ಚೆಲುವಿನ ಗುಣಗಾನ
ಕೇದಿಗೆ ಗರಿಯಂಥ ನಿನ್ನ ನೋಟ ,ನನಗೇನೊ ಅಂದಂತೆ ಅನುಮಾನ
ಕಣ್ಣಿಂದಲೆ ಸದ್ದಿಲ್ಲದೆ ಮುದ್ದಾದ ಕರೆ ಬಂದಿದೆ
ನಿನ್ನಿಂದಲೆ ನಿನ್ನಿಂದಲೆ ಕನಸೊಂದು ಶುರುವಾಗಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಹಲ,ನನ್ನೆದುರಲ್ಲೆ ನೀ ಹೀಗ ಬಂದಾಗಲೆ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ,ನಾ ನಿಂತಲ್ಲೆ ಹಾಡಾದೆ ನಿನ್ನಿಂದಲೆ
ನಿನ್ನಿಂದಲೆ ನಿನ್ನಿಂದಲೆ ಕನಸೊಂದು ಶುರುವಾಗಿದೆ
ನಿನ್ನಿಂದಲೆ ನಿನ್ನಿಂದಲೆ ಮನಸ್ಸಿಂದು ಕುಣಿದಾಡಿದೆ
ಮಳೆ ನಿಂತು ಹೋದ ಮೇಲೆ
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ,
ಮಾತೆಲ್ಲ ಮುಗಿದ ಮೇಲೆ, ದನಿಯೊಂದು ಕಾಡಿದೆ,
ಹೇಳುವುದು ಏನು ಉಳಿದು ಹೋಗಿದೆ,
ಹೇಳಲಿ ಹೇಗೆ ತಿಳಿಯದಾಗಿದೆ
ನೋವಿನಲ್ಲಿ ಜೀವ ಜೀವ ಅರಿತ ನಂತರ
ನಲಿವು ಬೇರೆ ಏನಿದೆ,ಏಕೆ ಅಂತರ
ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ
ಒಂದೆ ಸಾರಿ ನೀ ಕೇಳೆಯಾ ಈ ಸ್ವರ
ಮನಸ್ಸಲ್ಲಿ ಚೂರು ಜಾಗ ಬೇಕಿದೆ,ಕೇಳಲಿ ಹೇಗೆ ತಿಳಿಯದಾಗಿದೆ.
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ,
ಮಾತೆಲ್ಲ ಮುಗಿದ ಮೇಲೆ, ದನಿಯೊಂದು ಕಾಡಿದೆ.
ಕಣ್ಣು ತೆರೆದು ಕಾಣುವ ಕನಸೆ ಜೀವನ
ಸಣ್ಣ ಹಟವ ಮಾಡಿದೆ, ಹೃದಯ ಈ ದಿನ
ಎದೆಯ ದೂರವಾಣಿಯ ಕರೆಯ ರಿಂಗನ,
ಕೇಳು ಜೀವವೆ, ಏತಕೀ ಕಂಪನ
ಹೃದಯವು ಇಲ್ಲೆ ಕಳೆದು ಹೋಗಿದೆ,
ಹುಡುಕಲೆ, ಹೇಗೆ ತಿಳಿಯದಾಗಿದೆ
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ,
ಮಾತೆಲ್ಲ ಮುಗಿದ ಮೇಲೆ, ದನಿಯೊಂದು ಕಾಡಿದೆ.
ಹೇಳುವುದು ಏನು ಉಳಿದು ಹೋಗಿದೆ,
ಹೇಳಲಿ ಹೇಗೆ ತಿಳಿಯದಾಗಿದೆ
1 comment:
ಪ್ರಿಯ ರಮ್ಯ,
ನಮಸ್ಕಾರ. ಹೇಗಿದ್ದೀರಿ?
ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಇಂತಿ,
ಸುಶ್ರುತ ದೊಡ್ಡೇರಿ
Post a Comment